'ರೈತರ ಬದುಕು ಹಸನಾಗುವಂತಹ ರಾಜ್ಯ ನಮ್ಮದಾಗಬೇಕು. ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ಸಿಗುವಂತಾಗಬೇಕು' ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದಾ ಪೂರ್ಯಾನಾಯ್ಕ ಹೇಳಿದರು. ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದ ಅವರು ಕನಸಿನ ಕರ್ನಾಟಕ ಹೇಗಿರಬೇಕು? ಎಂದು ಅಭಿಪ್ರಾಯ ಹಂಚಿಕೊಂಡರು. 'ಕರ್ನಾಟಕದಲ್ಲಿ ರೈತ ಪರವಾದ ಸರ್ಕಾರ ಬರಬೇಕು. ಅವರ ಬದುಕು ಸುಂದರವಾಗಬೇಕು' ಎಂದರು.